

ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆ (ರಿ)
ನಮ್ಮ ವಿದ್ಯಾ ಸಂಸ್ಥೆಗೆ ಸ್ವಾಗತ,
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಸಾಕ್ಷರತೆಯ ಪ್ರಮಾಣದಲ್ಲಿ ಅತ್ಯಂತ ಹಿಂದುಳಿದಿದ್ದರೂ ಕಾಲಘಟ್ಟದುದ್ದಕ್ಕೂ ಉನ್ನತ ಪ್ರತಿಭೆಗಳನ್ನು ಈ ನಾಡಿಗೆ ನೀಡುತ್ತಾ ಬಂದಿದೆ. ಆದರೂ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯನ್ನು ಇನ್ನೂ ಪರಿಪೂರ್ಣವಾಗಿ ಅಳಿಸಿಹಾಕಲಾಗಿಲ್ಲ. ಇಂತಹ ಹಿಂದುಳಿದ ಪ್ರದೇಶದಲ್ಲಿ ಶೈಕ್ಷಣಿಕ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಧ್ಯೇಯ ಹೊಂದಿ 1986 ರಲ್ಲಿ ಶಿಶುವಿಹಾರ ತರಗತಿಯೊಂದಿಗೆ, 1988ರಲ್ಲಿ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ 1 ನೇ ತರಗತಿಯ ಪ್ರಾರಂಭದೊಂದಿಗೆ ಉದಯಿಸಿದ ಖಾಸಗಿ ಶಿಕ್ಷಣ ಸಂಸ್ಥೆ “ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ” ಇಪ್ಪತ್ತೈದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ಇಂದು ಶಿಶುವಿಹಾರ ತರಗತಿಯಿಂದ ಪೂರ್ಣ ಪ್ರಮಾಣದ ಪ್ರೌಢಶಾಲೆಯನ್ನು ಒಳಗೊಂಡು(ಹತ್ತನೇ ತರಗತಿವರೆಗೆ) ಹಲವಾರು ಕ್ರಿಯಾಶೀಲ – ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಸಮಾಜಕ್ಕೆ ನೀಡಿದೆ. ಇಂದು ಸುಮಾರು 500 ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯಲ್ಲಿ ಅಭ್ಯಸಿಸುತ್ತಿದ್ದು ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಕ್ರಿಯಾಶೀಲತೆಗೂ ಇಲ್ಲಿನ ಶಿಕ್ಷಕರು ಪರಿಶ್ರಮಿಸುತ್ತಿದ್ದಾರೆ.
ಸಂಪೂರ್ಣ ಗೋಳದಲಿ ನೆನೆದೆಡೆಯೆ ಕೇಂದ್ರವಲ|
ಕಂಪಿಸುವ ಕೇಂದ್ರ ನೀ ಬ್ರಹ್ಮ ಕಂದುಕದಿ||
ಶಂಪಾತರಂಗವದರೊಳು ತುಂಬಿ ಪರಿಯುತಿರೆ|
ದಂಭೋಳಿ ನೀನಾಗು-ಮಂಕುತಿಮ್ಮ||
ಗೋಳವೊಂದರ ಪ್ರತಿಯೊಂದು ಬಿಂದುವೂ ಕೇಂದ್ರವೇ. ಹಾಗೆಯೇ ಬ್ರಹ್ಮಸೃಷ್ಟಿಯ ಪ್ರತಿಯೊಂದು ಜೀವಿಯೂ ಶಕ್ತಿ ಕೇಂದ್ರಗಳು. ನಮ್ಮಲ್ಲಿ ಆತ್ಮವಿಶ್ವಾಸವೆಂಬ ವಿದ್ಯುತ್ ಪ್ರವಾಹ ತುಂಬಿ ಹರಿಯುತ್ತಿರುತ್ತದೆ. ಅದನ್ನು ಗುರುತಿಸಿ ಬಳಸಿಕೊಂಡರೆ ಪ್ರತಿಯೊಬ್ಬನೂ ದಂಭೋಳಿ ಅಂದರೆ ಇಂಧ್ರನ ವಜ್ರಾಯುಧದಷ್ಟು ಶಕ್ತಿಶಾಲಿಯಾಗಬಲ್ಲ.
“ಬನ್ನಿ ನಾವೆಲ್ಲ ಸೇರಿ ಹೊಸ ಭಾಷೆ ಬರೆಯೋಣ, ಹೊಸ ನಾಡ ಕಟ್ಟೋಣ.”
‘ಶಿಕ್ಷಣವೇ ಶಕ್ತಿ’





